ಜಮೀನುಗಳಿಗೆ ನುಗ್ಗಿದ ಹಳ್ಳದ ನೀರು-ರೈತರಿಂದ ಧಿಡೀರ್ ಪ್ರತಿಭಟನೆ
ಪ್ರಜಾಪಥ ವಾರ್ತೆ
ಗದಗ: ಗದಗನಲ್ಲಿ ರವಿವಾರ ರಾತ್ರಿ ಸುರಿದ ಮಳೆಯ ನೀರು ಹಳ್ಳಗಳು ತುಂಬಿ ಹರಿಯುವಂತೆ ಮಾಡಿದೆ. ಹೀಗಾಗಿ ಹಳ್ಳದ ನೀರು ಜಮೀನಿಗೆ ನುಗ್ಗಿದ್ದು, ಬೆಳೆ ನೀರು ಪಾಲಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ರಸ್ತೆ ತಡೆದು ಗಂಟೆಗಟ್ಟಲೆ ಪ್ರತಿಭಟನೆ ನಡೆಸುತ್ತಿರುವ ಘಟನೆ ಗದಗ ತಾಲ್ಲೂಕಿನ ಹುಯಿಲಗೋಳ ದಲ್ಲಿ ನಡೆದಿದೆ.
ಹಳ್ಳದಲ್ಲಿ ಹೂಳು ತುಂಬಿದ್ದು, ಸ್ಥಳೀಯಾಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದು ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಕತೆಯಾಗಿದೆ. ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಿದ್ದಾರೆ.