ಗದಗನಲ್ಲಿ ಮೂವರಿಗೆ ಚಾಕು ಇರಿತ: ಗಾಯಾಳು ಯಾರು? ಹಲ್ಲೆ ಆರೋಪ ಯಾರ ಮೇಲೆ?
ಪ್ರಜಾಪಥ ವಾರ್ತೆ
ಗದಗ: ಮೂವರ ಮೇಲೆ ಚಾಕು ಇರಿದು ಹಲ್ಲೆ ಮಾಡಿರುವ ಘಟನೆ ಗದಗ ನಲ್ಲಿ ನಡೆದಿದೆ.
ಗದಗ ನಗರದ ಕಿಲ್ಲಾ ಓಣಿಯಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಗೋಪಾಲ ಖೊಡೆ, ಮಾಧು ಬದಿ, ವಸಂತ ಬಾಕಳೆ ಎಂಬುವರ ಮೇಲೆ ಹಲ್ಲೆ ನಡೆದಿದೆ. ಗಾಯಾಳುಗಳು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
ರಾತ್ರಿ ಊಟಮಾಡಿ ಮನೆ ಹೊರಗಡೆ ಮಾತನಾಡ್ತಾ ನಿಂತವರ ಮೇಲೆ ಬೈಕ್ ಮೇಲೆ ಬಂದ ನಾಲ್ವರು ಚಾಕು ಇರಿದು ಹಲ್ಲೆ ಮಾಡಿದರು ಎಂದು ಆರೋಪಿಸಲಾಗುತ್ತಿದೆ.
ಹಲ್ಲೆಗೆ ಒಳಗಾದವರ ಕಣ್ಣು, ಎದೆ, ಕೈ, ಹೊಟ್ಟೆ ಭಾಗಗಳಿಗೆ ಗಾಯಗಳಾಗಿವೆ.
ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸೇಂಟ್ಲಿಮೆಂಟ್ ನ ಶಿವು, ಕಿಲ್ಲಾ ಓಣಿಯ ಸಾದಿಕ್ ಹಾಗೂ
ವಿನೀಶ್ ಮೇಲೆ ಆರೋಪ ಕೇಳಿಬರುತ್ತಿದೆ.